ಒಲವಿನ ಗೆಳತಿಗೆ,
ಅರೆಬರೆ ಸುಟ್ಟ ಹಪ್ಪಳ,
ಜೊತೆಗೆ ತನ್ನ ಪ್ರೀತಿಯ
ಸಕ್ಕರೆ ಬೆರೆಸಿದ ಕಾಫಿ ತಂದಿಟ್ಟು
ತನ್ನ ಎಂದಿನ ಮುಗ್ಧ ನಗು
ಬೀರಿದ ಅಮ್ಮನಿಗೊಮ್ಮೆ
ಕಣ್ಣಂಚಲ್ಲೇ ಮುದ್ದಿಸಿ,ಅವಳ
ಪ್ರೀತಿಯ ಘಮದಲ್ಲಿ
ನಿನಗೊಂದಿಷ್ಟು ಸಾಲು.....
ಮುಂಜಾನೆ
ಬೆಚ್ಚನೆ ಇಬ್ಬನಿ ತಬ್ಬಿ ಮಲಗಿದ ಭೂಮಿಯನ್ನು ತುಂತುರು
ಹನಿಗಳೊಡನೆ ಎಬ್ಬಿಸಿ
ತೀರಾ
ಸಂಜೆಯವರೆಗೂ ಧೋ ಎಂದು ಬಿಗಿದಪ್ಪುವ
ಮಳೆಯ ಪ್ರಣಯದಾಟಕ್ಕೆ
ಕೊಸರಾಡುವ
ಭೂಮಿ
ಯಾಕೋ
ನಿನ್ನ ನೆನಪಿಸಿದೆ....
ತೀರಾ
ನಡುರಾತ್ರಿಯಲಿ
ಹೆಂಚಿನ
ಮಾಡಿಗೆ ಹತ್ತಿರಾದ
ಅಟ್ಟದ ಮೇಲೆ,
ಕುಪ್ಪಸವಿಲ್ಲದ
ಸೀರೆಯುಟ್ಟು
ಕತ್ತಲಿಗೆ
ಬೆನ್ನು ಹಾಕಿ,ನನ್ನ
ತೋಳ
ಸೇರಿ, ಮಧ್ಯರಾತ್ರಿ ಹೆಂಚಿನ ಮಧ್ಯದಿಂದ ಒಳಗಿಣುಕುವ
ಮಳೆಯ
ಹನಿಯು,ಬೆತ್ತಲು ಬೆನ್ನಿನಲಿ ಸೃಷ್ಟಿಸಿದ
ತಣ್ಣನೆ
ಚಳಿಗೆ,
ಮತ್ತಷ್ಟು ಬಿಗಿದಪ್ಪುವ ನಿನ್ನ ನೆನಪಲ್ಲಿ
ನಾನೀಗ,
ಅದೇ
ಅಟ್ಟದಲ್ಲಿ,
ಹೆಂಚಿನ
ಮೇಲೆ ಸದ್ದಾಗುತ್ತಾ ಓಡುವ
ಹನಿಗಳ
ಸಪ್ಪಳದಲ್ಲಿ ನೀ ತೃಪ್ತಿಯಿಂದ
ಬೀರುತ್ತಿದ್ದ
ಉಸಿರ ಘಮವನ್ನು
ಹುಡುಕುವ ಏಕಾಂಗಿ...
No comments:
Post a Comment